ಮತ್ತಾಯನು 1:20

ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.

ಸಂದರ್ಭದೊಂದಿಗೆ ಓದಿ · ಮತ್ತಾಯನು 1

18ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು.

19ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು.

20ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.

21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.

22ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.

ಮತ್ತಾಯನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी