ಮತ್ತಾಯನು 1:18

ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು.

ಸಂದರ್ಭದೊಂದಿಗೆ ಓದಿ · ಮತ್ತಾಯನು 1

16ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು.

17ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಒಟ್ಟು ಹದಿನಾಲ್ಕು ತಲೆಗಳು; ದಾವೀದನು ಮೊದಲು ಗೊಂಡು ಬಾಬೆಲಿಗೆ ಸೆರೆಹೋಗುವ ವರೆಗೆ ಹದಿ ನಾಲ್ಕು ತಲೆಗಳು; ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ತಲೆಗಳು.

18ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು.

19ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು.

20ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.

ಮತ್ತಾಯನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी