ನೀವು ಇಂಥಾ ಕಾರ್ಯಗಳನ್ನು ಮಾಡು ವದೇನು? ಯಾಕಂದರೆ ನಾನು ಎಲ್ಲಾ ಜನರಿಂದ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ.
21ಅವರು ತಿರಿಗಿ ತಮ್ಮ ಮನೆಗೆ ಹೋದರು. ಹಾಗೆಯೇ ಕರ್ತನು ಹನ್ನಳನ್ನು ದರ್ಶಿಸಿ ದ್ದರಿಂದ ಅವಳು ಗರ್ಭಧರಿಸಿ ಮೂವರು ಕುಮಾರ ರನ್ನೂ ಇಬ್ಬರು ಕುಮಾರ್ತೆಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುವೇಲನು ಕರ್ತನ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು.
22ಆದರೆ ಏಲಿಯು ಬಹಳ ವೃದ್ಧನಾಗಿದ್ದನು. ತನ್ನ ಕುಮಾರರು ಇಸ್ರಾಯೇಲಿಗೆ ಮಾಡುವದೆಲ್ಲವನ್ನೂ ಅವರು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿ ಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬದನ್ನೂ ಕೇಳಿ ಅವರಿಗೆ--
23ನೀವು ಇಂಥಾ ಕಾರ್ಯಗಳನ್ನು ಮಾಡು ವದೇನು? ಯಾಕಂದರೆ ನಾನು ಎಲ್ಲಾ ಜನರಿಂದ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ.
24ನನ್ನ ಕುಮಾ ರರೇ, ಹಾಗೆ ಮಾಡಬೇಡಿರಿ; ಯಾಕಂದರೆ ನಾನು ಕೇಳುವ ವರ್ತಮಾನ ಒಳ್ಳೇದಲ್ಲ; ಕರ್ತನ ಜನರು ಆಜ್ಞೆವಿಾರಿ ನಡೆಯುವ ಹಾಗೆ ಮಾಡುತ್ತೀರಿ.
25ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ