೧ ಸಮುವೇಲನು 2:24

ನನ್ನ ಕುಮಾ ರರೇ, ಹಾಗೆ ಮಾಡಬೇಡಿರಿ; ಯಾಕಂದರೆ ನಾನು ಕೇಳುವ ವರ್ತಮಾನ ಒಳ್ಳೇದಲ್ಲ; ಕರ್ತನ ಜನರು ಆಜ್ಞೆವಿಾರಿ ನಡೆಯುವ ಹಾಗೆ ಮಾಡುತ್ತೀರಿ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 2

22ಆದರೆ ಏಲಿಯು ಬಹಳ ವೃದ್ಧನಾಗಿದ್ದನು. ತನ್ನ ಕುಮಾರರು ಇಸ್ರಾಯೇಲಿಗೆ ಮಾಡುವದೆಲ್ಲವನ್ನೂ ಅವರು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿ ಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬದನ್ನೂ ಕೇಳಿ ಅವರಿಗೆ--

23ನೀವು ಇಂಥಾ ಕಾರ್ಯಗಳನ್ನು ಮಾಡು ವದೇನು? ಯಾಕಂದರೆ ನಾನು ಎಲ್ಲಾ ಜನರಿಂದ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ.

24ನನ್ನ ಕುಮಾ ರರೇ, ಹಾಗೆ ಮಾಡಬೇಡಿರಿ; ಯಾಕಂದರೆ ನಾನು ಕೇಳುವ ವರ್ತಮಾನ ಒಳ್ಳೇದಲ್ಲ; ಕರ್ತನ ಜನರು ಆಜ್ಞೆವಿಾರಿ ನಡೆಯುವ ಹಾಗೆ ಮಾಡುತ್ತೀರಿ.

25ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.

26ಆದರೆ ಬಾಲಕನಾದ ಸಮು ವೇಲನು ಬೆಳೆಯುತ್ತಾ ಇದ್ದನು; ಕರ್ತನ ಮತ್ತು ಮನುಷ್ಯರ ದಯೆಗೆ ಪಾತ್ರನಾಗಿದ್ದನು.

೧ ಸಮುವೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी