೨ ಪೂರ್ವಕಾಲವೃತ್ತಾಂತ 1:10

ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 1

8ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.

9ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.

10ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.

11ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು.

12ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.

೨ ಪೂರ್ವಕಾಲವೃತ್ತಾಂತ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी