ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು.
2ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.
3ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು.
4ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು.
5ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
6ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ