ಯೆರೆಮಿಯ 9:10

ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ ದುಃಖವನ್ನೂ ಅರಣ್ಯದ ಸ್ಥಳಗಳಿಗೋಸ್ಕರ ಗೋಳಾಟ ವನ್ನೂ ಎತ್ತುವೆನು; ಅವುಗಳ ಮೂಲಕ ಹಾದು ಹೋಗದ ಹಾಗೆ ಅದು ಸುಡಲ್ಪಟ್ಟಿದೆ; ದನಗಳ ಶಬ್ದವು ಕೇಳಲ್ಪಡುವದಿಲ್ಲ; ಆಕಾಶದ ಪಕ್ಷಿಗಳೂ ಮೃಗಗಳೂ ಸಹ ಓಡಿಹೋಗಿವೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 9

8ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.

9ಇವು ಗಳ ನಿಮಿತ್ತ ನಾನು ಅವರನ್ನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.

10ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ ದುಃಖವನ್ನೂ ಅರಣ್ಯದ ಸ್ಥಳಗಳಿಗೋಸ್ಕರ ಗೋಳಾಟ ವನ್ನೂ ಎತ್ತುವೆನು; ಅವುಗಳ ಮೂಲಕ ಹಾದು ಹೋಗದ ಹಾಗೆ ಅದು ಸುಡಲ್ಪಟ್ಟಿದೆ; ದನಗಳ ಶಬ್ದವು ಕೇಳಲ್ಪಡುವದಿಲ್ಲ; ಆಕಾಶದ ಪಕ್ಷಿಗಳೂ ಮೃಗಗಳೂ ಸಹ ಓಡಿಹೋಗಿವೆ.

11ಇದಲ್ಲದೆ ಯೆರೂಸಲೇಮನ್ನು ದಿಬ್ಬೆಗಳಾಗಿಯೂ ನರಿಗಳ ಸ್ಥಾನವಾಗಿಯೂ ಮಾಡು ತ್ತೇನೆ; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳುಮಾಡುತ್ತೇನೆ.

12ಇದನ್ನು ಗ್ರಹಿಸುವ ಜ್ಞಾನಿ ಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಕರ್ತನ ಬಾಯಿ ಯಾರ ಸಂಗಡ ಮಾತನಾಡಿತ್ತು? ದೇಶವು ಯಾವದಕ್ಕಾಗಿ ನಾಶವಾಗಿ ಹಾದು ಹೋಗುವ ವನಿಲ್ಲದೆ ಅರಣ್ಯದ ಹಾಗೆ ಹಾಳಾಯಿತು?

ಯೆರೆಮಿಯ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी