ಯೆರೆಮಿಯ 9:11

ಇದಲ್ಲದೆ ಯೆರೂಸಲೇಮನ್ನು ದಿಬ್ಬೆಗಳಾಗಿಯೂ ನರಿಗಳ ಸ್ಥಾನವಾಗಿಯೂ ಮಾಡು ತ್ತೇನೆ; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳುಮಾಡುತ್ತೇನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 9

9ಇವು ಗಳ ನಿಮಿತ್ತ ನಾನು ಅವರನ್ನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.

10ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ ದುಃಖವನ್ನೂ ಅರಣ್ಯದ ಸ್ಥಳಗಳಿಗೋಸ್ಕರ ಗೋಳಾಟ ವನ್ನೂ ಎತ್ತುವೆನು; ಅವುಗಳ ಮೂಲಕ ಹಾದು ಹೋಗದ ಹಾಗೆ ಅದು ಸುಡಲ್ಪಟ್ಟಿದೆ; ದನಗಳ ಶಬ್ದವು ಕೇಳಲ್ಪಡುವದಿಲ್ಲ; ಆಕಾಶದ ಪಕ್ಷಿಗಳೂ ಮೃಗಗಳೂ ಸಹ ಓಡಿಹೋಗಿವೆ.

11ಇದಲ್ಲದೆ ಯೆರೂಸಲೇಮನ್ನು ದಿಬ್ಬೆಗಳಾಗಿಯೂ ನರಿಗಳ ಸ್ಥಾನವಾಗಿಯೂ ಮಾಡು ತ್ತೇನೆ; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳುಮಾಡುತ್ತೇನೆ.

12ಇದನ್ನು ಗ್ರಹಿಸುವ ಜ್ಞಾನಿ ಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಕರ್ತನ ಬಾಯಿ ಯಾರ ಸಂಗಡ ಮಾತನಾಡಿತ್ತು? ದೇಶವು ಯಾವದಕ್ಕಾಗಿ ನಾಶವಾಗಿ ಹಾದು ಹೋಗುವ ವನಿಲ್ಲದೆ ಅರಣ್ಯದ ಹಾಗೆ ಹಾಳಾಯಿತು?

13ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ

ಯೆರೆಮಿಯ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी