ಆದಿಕಾಂಡ 31:37

ನೀನು ನನ್ನ ಸಾಮಾನುಗಳನ್ನೆಲ್ಲಾ ಹುಡಿಕಿದ ಮೇಲೆ ನಿನ್ನ ಮನೆಯ ಸಾಮಾನುಗಳಲ್ಲಿ ಏನು ಕಂಡುಕೊಂಡಿ? ನನಗೂ ನಿನಗೂ ಸಹೋದರರಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

35ರಾಹೇಲಳು ತನ್ನ ತಂದೆಗೆ--ನಾನು ನಿನ್ನ ಮುಂದೆ ಏಳಲಾರದೆ ಇರುವದರಿಂದ ನನ್ನ ಪ್ರಭುವೇ, ನಿನಗೆ ಕೋಪಬಾರದೆ ಇರಲಿ. ಯಾಕಂದರೆ ಸ್ತ್ರೀಯರ ಕ್ರಮ ನನಗೆ ಆಗಿದೆ ಅಂದಳು. ಅವನು ಆ ವಿಗ್ರಹಗಳನ್ನು ಹುಡುಕಿ ಕಂಡುಕೊಳ್ಳದೆ ಹೋದನು.

36ಆಗ ಯಾಕೋಬನು ಕೋಪಗೊಂಡು ಲಾಬಾ ನನ ಕೂಡ ವಾದಿಸಿದನು. ಯಾಕೋಬನು ಪ್ರತ್ಯುತ್ತರ ವಾಗಿ ಲಾಬಾನನಿಗೆ--ನೀನು ನನ್ನನ್ನು ಬೆನ್ನಟ್ಟಿ ಬರು ವದಕ್ಕೆ ನನ್ನ ಅಪರಾಧವೇನು? ನನ್ನ ಪಾಪವೇನು?

37ನೀನು ನನ್ನ ಸಾಮಾನುಗಳನ್ನೆಲ್ಲಾ ಹುಡಿಕಿದ ಮೇಲೆ ನಿನ್ನ ಮನೆಯ ಸಾಮಾನುಗಳಲ್ಲಿ ಏನು ಕಂಡುಕೊಂಡಿ? ನನಗೂ ನಿನಗೂ ಸಹೋದರರಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.

38ಈ ಇಪ್ಪತ್ತು ವರುಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ ಮೇಕೆಗಳೂ ಕಂದು ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ.

39ಮೃಗಗಳಿಂದ ಕೊಲ್ಲಲ್ಪಟ್ಟವುಗಳನ್ನು ನಿನ್ನ ಬಳಿಗೆ ತಾರದೆ ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡಿ.

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी