ಆದಿಕಾಂಡ 31:35

ರಾಹೇಲಳು ತನ್ನ ತಂದೆಗೆ--ನಾನು ನಿನ್ನ ಮುಂದೆ ಏಳಲಾರದೆ ಇರುವದರಿಂದ ನನ್ನ ಪ್ರಭುವೇ, ನಿನಗೆ ಕೋಪಬಾರದೆ ಇರಲಿ. ಯಾಕಂದರೆ ಸ್ತ್ರೀಯರ ಕ್ರಮ ನನಗೆ ಆಗಿದೆ ಅಂದಳು. ಅವನು ಆ ವಿಗ್ರಹಗಳನ್ನು ಹುಡುಕಿ ಕಂಡುಕೊಳ್ಳದೆ ಹೋದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

33ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಅವುಗಳನ್ನು ಕಂಡು ಕೊಳ್ಳಲಿಲ್ಲ; ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು.

34ಆದರೆ ರಾಹೇಲಳು ವಿಗ್ರಹಗಳನ್ನು ತಕ್ಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು ಅದರ ಮೇಲೆ ಕೂತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದಾಗ್ಯೂ ಅವನು ಅವುಗಳನ್ನು ಕಂಡುಕೊಳ್ಳಲಿಲ್ಲ.

35ರಾಹೇಲಳು ತನ್ನ ತಂದೆಗೆ--ನಾನು ನಿನ್ನ ಮುಂದೆ ಏಳಲಾರದೆ ಇರುವದರಿಂದ ನನ್ನ ಪ್ರಭುವೇ, ನಿನಗೆ ಕೋಪಬಾರದೆ ಇರಲಿ. ಯಾಕಂದರೆ ಸ್ತ್ರೀಯರ ಕ್ರಮ ನನಗೆ ಆಗಿದೆ ಅಂದಳು. ಅವನು ಆ ವಿಗ್ರಹಗಳನ್ನು ಹುಡುಕಿ ಕಂಡುಕೊಳ್ಳದೆ ಹೋದನು.

36ಆಗ ಯಾಕೋಬನು ಕೋಪಗೊಂಡು ಲಾಬಾ ನನ ಕೂಡ ವಾದಿಸಿದನು. ಯಾಕೋಬನು ಪ್ರತ್ಯುತ್ತರ ವಾಗಿ ಲಾಬಾನನಿಗೆ--ನೀನು ನನ್ನನ್ನು ಬೆನ್ನಟ್ಟಿ ಬರು ವದಕ್ಕೆ ನನ್ನ ಅಪರಾಧವೇನು? ನನ್ನ ಪಾಪವೇನು?

37ನೀನು ನನ್ನ ಸಾಮಾನುಗಳನ್ನೆಲ್ಲಾ ಹುಡಿಕಿದ ಮೇಲೆ ನಿನ್ನ ಮನೆಯ ಸಾಮಾನುಗಳಲ್ಲಿ ಏನು ಕಂಡುಕೊಂಡಿ? ನನಗೂ ನಿನಗೂ ಸಹೋದರರಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी