ಯೆರೆಮಿಯ 38:23

ಹಾಗೆ ನಿನ್ನ ಹೆಂಡತಿಯರೆಲ್ಲರನ್ನೂ ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ತರುವರು; ನೀನು ಅವರ ಕೈಗೆ ತಪ್ಪಿಸಿಕೊಳ್ಳು ವದಿಲ್ಲ; ಬಾಬೆಲಿನ ಅರಸನ ಕೈಯಿಂದ ಹಿಡಿಯಲ್ಪ ಡುವಿ; ಈ ಪಟ್ಟಣವನ್ನು ನೀನೇ ಬೆಂಕಿಯಿಂದ ಸುಡುವಿ ಅಂದನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 38

21ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--

22ಇಗೋ, ಯೆಹೂದದ ಅರಸನ ಮನೆ ಯಲ್ಲಿ ಉಳಿದ ಹೆಂಗಸರೆಲ್ಲರು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ತರಲ್ಪಟ್ಟು ಹೇಳುವದೇ ನಂದರೆ--ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ; ನಿನ್ನ ಕಾಲುಗಳು ಕೆಸರಿನಲ್ಲಿ ಮುಳುಗಿವೆ; ಆದರೆ ಅವರು ಹಿಂಜರಿದಿದ್ದಾರೆ.

23ಹಾಗೆ ನಿನ್ನ ಹೆಂಡತಿಯರೆಲ್ಲರನ್ನೂ ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ತರುವರು; ನೀನು ಅವರ ಕೈಗೆ ತಪ್ಪಿಸಿಕೊಳ್ಳು ವದಿಲ್ಲ; ಬಾಬೆಲಿನ ಅರಸನ ಕೈಯಿಂದ ಹಿಡಿಯಲ್ಪ ಡುವಿ; ಈ ಪಟ್ಟಣವನ್ನು ನೀನೇ ಬೆಂಕಿಯಿಂದ ಸುಡುವಿ ಅಂದನು.

24ಆಗ ಚಿದ್ಕೀಯನು ಯೆರೆವಿಾಯನಿಗೆ ಹೇಳಿದ್ದೇನಂದರೆ--ನೀನು ಸಾಯದ ಹಾಗೆ ಈ ಮಾತುಗಳನ್ನು ಯಾರಿಗೂ ತಿಳಿಸಬಾರದು.

25ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿ ದ್ದೇನೆಂದು ಕೇಳಿ ನಿನ್ನ ಬಳಿಗೆ ಬಂದು--ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು; ನಾವು ನಿನ್ನನ್ನು ಕೊಂದುಹಾಕುವದಿಲ್ಲ; ಅರಸನು ನಿನ್ನ ಸಂಗಡ ಮಾತಾ ಡಿದ್ದನ್ನು ಸಹ ತಿಳಿಸು ಎಂದು ಹೇಳಿದರೆ--

ಯೆರೆಮಿಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी