ಯೆರೆಮಿಯ 38:21

ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--

ಸಂದರ್ಭದೊಂದಿಗೆ ಓದಿ · ಯೆರೆಮಿಯ 38

19ಆಗ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ನಾನು ಕಸ್ದೀಯರಿಗೆ ಒಳಬಿದ್ದ ಯೆಹೂದ್ಯರ ವಿಷಯ ಅಂಜು ತ್ತೇನೆ; ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು.

20ಆಗ ಅವರು ನನ್ನನ್ನು ಅಪಹಾಸ್ಯ ಮಾಡುವರು ಅಂದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ --ಅವರು ನಿನ್ನನ್ನು ಒಪ್ಪಿಸುವದಿಲ್ಲ; ನಾನು ನಿನಗೆ ಹೇಳುವ ಕರ್ತನ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೇದಾಗುವದು; ನಿನ್ನ ಪ್ರಾಣ ಬದುಕು ವದು.

21ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--

22ಇಗೋ, ಯೆಹೂದದ ಅರಸನ ಮನೆ ಯಲ್ಲಿ ಉಳಿದ ಹೆಂಗಸರೆಲ್ಲರು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ತರಲ್ಪಟ್ಟು ಹೇಳುವದೇ ನಂದರೆ--ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ; ನಿನ್ನ ಕಾಲುಗಳು ಕೆಸರಿನಲ್ಲಿ ಮುಳುಗಿವೆ; ಆದರೆ ಅವರು ಹಿಂಜರಿದಿದ್ದಾರೆ.

23ಹಾಗೆ ನಿನ್ನ ಹೆಂಡತಿಯರೆಲ್ಲರನ್ನೂ ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ತರುವರು; ನೀನು ಅವರ ಕೈಗೆ ತಪ್ಪಿಸಿಕೊಳ್ಳು ವದಿಲ್ಲ; ಬಾಬೆಲಿನ ಅರಸನ ಕೈಯಿಂದ ಹಿಡಿಯಲ್ಪ ಡುವಿ; ಈ ಪಟ್ಟಣವನ್ನು ನೀನೇ ಬೆಂಕಿಯಿಂದ ಸುಡುವಿ ಅಂದನು.

ಯೆರೆಮಿಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी