ಯೆರೆಮಿಯ 44:26

ಆದದರಿಂದ ಐಗುಪ್ತ ದೇಶದಲ್ಲಿ ವಾಸವಾಗಿರುವ ಯೆಹೂದದವರೆಲ್ಲರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೇಳು ತ್ತಾನೆ--ಇಗೋ, ಕರ್ತನಾದ ದೇವರ ಜೀವದಾಣೆ ಎಂದು ನನ್ನ ಹೆಸರು ಇನ್ನು ಮೇಲೆ ಸಮಸ್ತ ಐಗುಪ್ತ ದೇಶದಲ್ಲಿ ಯೆಹೂದದ ಮನುಷ್ಯರಲ್ಲಿ ಒಬ್ಬನ ಬಾಯಿಂದಲಾದರೂ ಹೇಳಲ್ಪಡುವದಿಲ್ಲವೆಂದು ನನ್ನ ಮಹತ್ತಾದ ಹೆಸರಿನಲ್ಲಿ ಆಣೆ ಇಟ್ಟುಕೊಂಡಿದ್ದೇನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 44

24ಇದಲ್ಲದೆ, ಯೆರೆವಿಾಯನು ಎಲ್ಲಾ ಜನರಿಗೂ ಹೆಂಗಸರಿಗೂ ಹೇಳಿದ್ದೇನಂದರೆ--ಐಗುಪ್ತದೇಶದ ಲ್ಲಿರುವ ಯೆಹೂದದವರೆಲ್ಲರೇ, ಕರ್ತನ ವಾಕ್ಯವನ್ನು ಕೇಳಿರಿ.

25ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವೂ ನಿಮ್ಮ ಹೆಂಡತಿ ಯರೂ ಗಗನದ ಒಡತಿಗೆ ಧೂಪ ಸುಡುತ್ತೇವೆಂದೂ ಅವಳಿಗೆ ಪಾನದರ್ಪಣೆಗಳನ್ನು ಹೊಯ್ಯುತ್ತೇವೆಂದೂ ನಾವು ಮಾಡಿರುವ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವೆವೆಂದೂ ನಿಮ್ಮ ಬಾಯಿಗಳಿಂದ ಹೇಳಿ ಕೈಗಳಿಂದ ಈಡೇರಿಸಿದ್ದೀರಿ; ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ಸ್ಥಾಪಿಸುವಿರಿ, ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವಿರಿ.

26ಆದದರಿಂದ ಐಗುಪ್ತ ದೇಶದಲ್ಲಿ ವಾಸವಾಗಿರುವ ಯೆಹೂದದವರೆಲ್ಲರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೇಳು ತ್ತಾನೆ--ಇಗೋ, ಕರ್ತನಾದ ದೇವರ ಜೀವದಾಣೆ ಎಂದು ನನ್ನ ಹೆಸರು ಇನ್ನು ಮೇಲೆ ಸಮಸ್ತ ಐಗುಪ್ತ ದೇಶದಲ್ಲಿ ಯೆಹೂದದ ಮನುಷ್ಯರಲ್ಲಿ ಒಬ್ಬನ ಬಾಯಿಂದಲಾದರೂ ಹೇಳಲ್ಪಡುವದಿಲ್ಲವೆಂದು ನನ್ನ ಮಹತ್ತಾದ ಹೆಸರಿನಲ್ಲಿ ಆಣೆ ಇಟ್ಟುಕೊಂಡಿದ್ದೇನೆ.

27ಇಗೋ, ನಾನು ಒಳ್ಳೇದಕ್ಕಾಗಿ ಅಲ್ಲ, ಕೆಟ್ಟದಕ್ಕಾಗಿ ಅವರ ಮೇಲೆ ಎಚ್ಚರವಾಗಿರುವೆನು; ಐಗುಪ್ತ ದೇಶದ ಲ್ಲಿರುವ ಯೆಹೂದದ ಮನುಷ್ಯರೆಲ್ಲರೂ ಮುಗಿದು ಅಂತ್ಯವಾಗುವ ವರೆಗೆ ಕತ್ತಿಯಿಂದಲೂ ಬರದಿಂದಲೂ ನಾಶವಾಗುವರು.

28ಆದರೆ ಕತ್ತಿಗೆ ತಪ್ಪಿಸಿಕೊಂಡು ಸ್ವಲ್ಪ ಜನರು ಐಗುಪ್ತದೇಶದೊಳಗಿಂದ ಯೆಹೂದ ದೇಶಕ್ಕೆ ಹಿಂತಿರುಗಿ ಹೋಗುವರು; ಆಗ ಐಗುಪ್ತ ದೇಶದಲ್ಲಿ ತಂಗುವದಕ್ಕೆ ಬಂದಿರುವ ಯೆಹೂದದ ಉಳಿದವರೆಲ್ಲಾ ನನ್ನ ಮಾತು ನಿಲ್ಲುವದೋ ಅವರ ಮಾತು ನಿಲ್ಲುವದೋ ಎಂಬದನ್ನು ತಿಳಿದುಕೊಳ್ಳುವರು.

ಯೆರೆಮಿಯ 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी