ಯೆರೆಮಿಯ 44:24

ಇದಲ್ಲದೆ, ಯೆರೆವಿಾಯನು ಎಲ್ಲಾ ಜನರಿಗೂ ಹೆಂಗಸರಿಗೂ ಹೇಳಿದ್ದೇನಂದರೆ--ಐಗುಪ್ತದೇಶದ ಲ್ಲಿರುವ ಯೆಹೂದದವರೆಲ್ಲರೇ, ಕರ್ತನ ವಾಕ್ಯವನ್ನು ಕೇಳಿರಿ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 44

22ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ ನೀವು ಮಾಡಿದ ಅಸಹ್ಯಗಳನ್ನೂ ಕರ್ತನು ಇನ್ನು ತಾಳಲಾರದ್ದದರಿಂದ ನಿಮ್ಮ ದೇಶವು ಈ ದಿನ ಇರುವ ಪ್ರಕಾರ ನಿವಾಸಿಗಳಿಲ್ಲದೆ ಹಾಳಾಗಿಯೂ ವಿಸ್ಮಯ ವಾಗಿಯೂ ಶಾಪವಾಗಿಯೂ ಇದೆ.

23ನೀವು ಧೂಪಸುಟ್ಟು ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಕರ್ತನ ಶಬ್ದವನ್ನು ಕೇಳದೆ ಆತನ ನ್ಯಾಯಪ್ರಮಾಣ ದಲ್ಲಾದರೂ ಆತನ ನಿಯಮಗಳಲ್ಲಾದರೂ ಆತನ ಸಾಕ್ಷಿಗಳಲ್ಲಾದರೂ ನಡೆದು ವಿಧೇಯರಾಗದೆ ಇದದರಿಂದ ಈ ಕೇಡು ಈ ದಿನ ಇರುವ ಹಾಗೆ ನಿಮಗೆ ಸಂಭವಿಸಿದೆ.

24ಇದಲ್ಲದೆ, ಯೆರೆವಿಾಯನು ಎಲ್ಲಾ ಜನರಿಗೂ ಹೆಂಗಸರಿಗೂ ಹೇಳಿದ್ದೇನಂದರೆ--ಐಗುಪ್ತದೇಶದ ಲ್ಲಿರುವ ಯೆಹೂದದವರೆಲ್ಲರೇ, ಕರ್ತನ ವಾಕ್ಯವನ್ನು ಕೇಳಿರಿ.

25ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವೂ ನಿಮ್ಮ ಹೆಂಡತಿ ಯರೂ ಗಗನದ ಒಡತಿಗೆ ಧೂಪ ಸುಡುತ್ತೇವೆಂದೂ ಅವಳಿಗೆ ಪಾನದರ್ಪಣೆಗಳನ್ನು ಹೊಯ್ಯುತ್ತೇವೆಂದೂ ನಾವು ಮಾಡಿರುವ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವೆವೆಂದೂ ನಿಮ್ಮ ಬಾಯಿಗಳಿಂದ ಹೇಳಿ ಕೈಗಳಿಂದ ಈಡೇರಿಸಿದ್ದೀರಿ; ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ಸ್ಥಾಪಿಸುವಿರಿ, ನಿಮ್ಮ ಪ್ರಮಾಣಗಳನ್ನು ನಿಶ್ಚಯವಾಗಿ ನಡಿಸುವಿರಿ.

26ಆದದರಿಂದ ಐಗುಪ್ತ ದೇಶದಲ್ಲಿ ವಾಸವಾಗಿರುವ ಯೆಹೂದದವರೆಲ್ಲರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೇಳು ತ್ತಾನೆ--ಇಗೋ, ಕರ್ತನಾದ ದೇವರ ಜೀವದಾಣೆ ಎಂದು ನನ್ನ ಹೆಸರು ಇನ್ನು ಮೇಲೆ ಸಮಸ್ತ ಐಗುಪ್ತ ದೇಶದಲ್ಲಿ ಯೆಹೂದದ ಮನುಷ್ಯರಲ್ಲಿ ಒಬ್ಬನ ಬಾಯಿಂದಲಾದರೂ ಹೇಳಲ್ಪಡುವದಿಲ್ಲವೆಂದು ನನ್ನ ಮಹತ್ತಾದ ಹೆಸರಿನಲ್ಲಿ ಆಣೆ ಇಟ್ಟುಕೊಂಡಿದ್ದೇನೆ.

ಯೆರೆಮಿಯ 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी