೧ ಸಮುವೇಲನು 3:16

ಆಗ ಏಲಿಯು ಸಮುವೇಲನನ್ನು ಕರೆದು ಅವನಿಗೆ ನನ್ನ ಮಗನಾದ ಸಮುವೇಲನೇ ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 3

14ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.

15ಸಮುವೇಲನು ಉದಯದವರೆಗೂ ಮಲಗಿದ್ದು ಕರ್ತನ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುವೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯ ಪಟ್ಟನು.

16ಆಗ ಏಲಿಯು ಸಮುವೇಲನನ್ನು ಕರೆದು ಅವನಿಗೆ ನನ್ನ ಮಗನಾದ ಸಮುವೇಲನೇ ಅಂದನು.

17ಅದಕ್ಕವನು--ಇಗೋ, ಇದ್ದೇನೆ ಅಂದನು. ಏಲಿ ಯು ಅವನಿಗೆ--ಕರ್ತನು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಕರ್ತನು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವದನ್ನಾದರೂ ನನಗೆ ಮರೆಮಾಡಿದರೆ ದೇವರು ನಿನಗೆ ಅದಕ್ಕಿಂತ ಅಧಿಕವಾಗಿ ಮಾಡಲಿ ಅಂದನು.

18ಸಮುವೇಲನು ಒಂದನ್ನೂ ಮರೆಮಾಡದೆ ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು--ಅದು ಕರ್ತನದೇ ಆಗಿದೆ. ಆತನು ಸರಿತೋರುವದನ್ನು ಮಾಡಲಿ ಅಂದನು.

೧ ಸಮುವೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी