೧ ಸಮುವೇಲನು 3:15

ಸಮುವೇಲನು ಉದಯದವರೆಗೂ ಮಲಗಿದ್ದು ಕರ್ತನ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುವೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯ ಪಟ್ಟನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 3

13ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ.

14ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.

15ಸಮುವೇಲನು ಉದಯದವರೆಗೂ ಮಲಗಿದ್ದು ಕರ್ತನ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುವೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯ ಪಟ್ಟನು.

16ಆಗ ಏಲಿಯು ಸಮುವೇಲನನ್ನು ಕರೆದು ಅವನಿಗೆ ನನ್ನ ಮಗನಾದ ಸಮುವೇಲನೇ ಅಂದನು.

17ಅದಕ್ಕವನು--ಇಗೋ, ಇದ್ದೇನೆ ಅಂದನು. ಏಲಿ ಯು ಅವನಿಗೆ--ಕರ್ತನು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಕರ್ತನು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವದನ್ನಾದರೂ ನನಗೆ ಮರೆಮಾಡಿದರೆ ದೇವರು ನಿನಗೆ ಅದಕ್ಕಿಂತ ಅಧಿಕವಾಗಿ ಮಾಡಲಿ ಅಂದನು.

೧ ಸಮುವೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी