ನ್ಯಾಯಸ್ಥಾಪಕರು 4:10

ಬಾರಾಕನು ಜೆಬುಲೂನ್ಯರನ್ನೂ ನಫ್ತಾಲ್ಯರಯನ್ನೂ ಕೆದೆಷಿಗೆ ಕರೆದನು; ಅವನು ಹತ್ತು ಸಾವಿರ ಜನರ ಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 4

8ಬಾರಾಕನು ಅವಳಿಗೆ--ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು; ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವದಿಲ್ಲ ಅಂದನು.

9ಅದಕ್ಕವಳುನಾನು ನಿನ್ನ ಸಂಗಡ ನಿಶ್ಚಯವಾಗಿ ಬರುವೆನು; ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನವು ನಿನ್ನದಾಗಿರುವದಿಲ್ಲ; ಕರ್ತನು ಒಬ್ಬ ಸ್ತ್ರೀಯ ಕೈಗೆ ಸೀಸೆರನನ್ನು ಮಾರಿಬಿಡುವನು ಎಂದು ಹೇಳಿ ದಳು. ದೆಬೋರಳು ಎದ್ದು ಬಾರಾಕನ ಕೂಡ ಕೆದೆಷಿಗೆ ಹೋದಳು.

10ಬಾರಾಕನು ಜೆಬುಲೂನ್ಯರನ್ನೂ ನಫ್ತಾಲ್ಯರಯನ್ನೂ ಕೆದೆಷಿಗೆ ಕರೆದನು; ಅವನು ಹತ್ತು ಸಾವಿರ ಜನರ ಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು.

11ಮೋಶೆಯ ಮಾವ ನಾದ ಹೋಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರೆಂಬವನು ಕೇನ್ಯರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿ ತನ್ನ ಗುಡಾರವನ್ನು ಕೆದೆಷಿನ ಬಳಿಯಲ್ಲಿರುವ ಚಾನನ್ನೀಮೆಂಬ ಬೈಲಿನಲ್ಲಿ ಹಾಕಿಕೊಂಡಿದ್ದನು.

12ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್‌ ಬೆಟ್ಟವನ್ನೇರಿದನೆಂದು ಸೀಸೆರನಿಗೆ ತಿಳಿಸ ಲ್ಪಟ್ಟಿತು.

ನ್ಯಾಯಸ್ಥಾಪಕರು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी