ನ್ಯಾಯಸ್ಥಾಪಕರು 4:9

ಅದಕ್ಕವಳುನಾನು ನಿನ್ನ ಸಂಗಡ ನಿಶ್ಚಯವಾಗಿ ಬರುವೆನು; ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನವು ನಿನ್ನದಾಗಿರುವದಿಲ್ಲ; ಕರ್ತನು ಒಬ್ಬ ಸ್ತ್ರೀಯ ಕೈಗೆ ಸೀಸೆರನನ್ನು ಮಾರಿಬಿಡುವನು ಎಂದು ಹೇಳಿ ದಳು. ದೆಬೋರಳು ಎದ್ದು ಬಾರಾಕನ ಕೂಡ ಕೆದೆಷಿಗೆ ಹೋದಳು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 4

7ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನಿನ ಬಳಿಗೆ ಬರಮಾಡಿ ಅವನನ್ನು ನಿನ್ನ ಕೈ ಯಲ್ಲಿ ಒಪ್ಪಿಸಿಕೊಡುವೆನು ಅಂದಳು.

8ಬಾರಾಕನು ಅವಳಿಗೆ--ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು; ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವದಿಲ್ಲ ಅಂದನು.

9ಅದಕ್ಕವಳುನಾನು ನಿನ್ನ ಸಂಗಡ ನಿಶ್ಚಯವಾಗಿ ಬರುವೆನು; ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನವು ನಿನ್ನದಾಗಿರುವದಿಲ್ಲ; ಕರ್ತನು ಒಬ್ಬ ಸ್ತ್ರೀಯ ಕೈಗೆ ಸೀಸೆರನನ್ನು ಮಾರಿಬಿಡುವನು ಎಂದು ಹೇಳಿ ದಳು. ದೆಬೋರಳು ಎದ್ದು ಬಾರಾಕನ ಕೂಡ ಕೆದೆಷಿಗೆ ಹೋದಳು.

10ಬಾರಾಕನು ಜೆಬುಲೂನ್ಯರನ್ನೂ ನಫ್ತಾಲ್ಯರಯನ್ನೂ ಕೆದೆಷಿಗೆ ಕರೆದನು; ಅವನು ಹತ್ತು ಸಾವಿರ ಜನರ ಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು.

11ಮೋಶೆಯ ಮಾವ ನಾದ ಹೋಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರೆಂಬವನು ಕೇನ್ಯರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿ ತನ್ನ ಗುಡಾರವನ್ನು ಕೆದೆಷಿನ ಬಳಿಯಲ್ಲಿರುವ ಚಾನನ್ನೀಮೆಂಬ ಬೈಲಿನಲ್ಲಿ ಹಾಕಿಕೊಂಡಿದ್ದನು.

ನ್ಯಾಯಸ್ಥಾಪಕರು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी