೧ ಸಮುವೇಲನು 14:5

ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ ಮತ್ತೊಂದು ದಕ್ಷಿಣಕ್ಕೆ ಗಿಬೆಗೆ ಎದುರಾಗಿಯೂ ಇತ್ತು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 14

3ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.

4ಯೋನಾತಾನನು ಫಿಲಿಷ್ಟಿ ಯರ ಠಾಣಕ್ಕೆ ದಾಟಿ ಹೋಗಬೇಕೆಂದು ಹುಡುಕಿದ ಮಾರ್ಗದ ಮಧ್ಯದಲ್ಲಿ ಈ ಕಡೆ ಆ ಕಡೆಯಲ್ಲಿ ಬೋಚೇಚ್‌ ಸೆನೆ ಎಂಬ ಚೂಪಾದ ಎರಡು ಬಂಡೆ ಗಳಿದ್ದವು.

5ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ ಮತ್ತೊಂದು ದಕ್ಷಿಣಕ್ಕೆ ಗಿಬೆಗೆ ಎದುರಾಗಿಯೂ ಇತ್ತು.

6ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.

7ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ--ನಿನ್ನ ಹೃದಯದಲ್ಲಿ ಇರುವದನ್ನೆಲ್ಲಾ ಮಾಡು, ನಡೆ; ಇಗೋ, ನಿನ್ನ ಹೃದಯಕ್ಕೆ ಸರಿಯಾಗಿ ನಾನೂ ನಿನ್ನ ಸಂಗಡ ಇದ್ದೇನೆ ಅಂದನು.

೧ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी