ಯೆರೆಮಿಯ 43:8

ಆಗ ತಹಪನೇಸಿನಲ್ಲಿ ಕರ್ತನ ವಾಕ್ಯವು ಯೆರೆವಿಾ ಯನಿಗೆ ಉಂಟಾಯಿತು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 43

6ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅರಸನ ಕುಮಾರ್ತೆಯ ರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾ ನನು ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ ಪ್ರವಾದಿಯಾದ ಯೆರೆವಿಾಯನನ್ನೂ ನೇರೀಯನ ಮಗನಾದ ಬಾರೂಕನನ್ನೂ ತೆಗೆದುಕೊಂಡು ಐಗುಪ್ತದೇಶಕ್ಕೆ ಹೋದರು.

7ಅವರು ಕರ್ತನ ಮಾತಿಗೆ ಕಿವಿಗೊಡಲಿಲ್ಲ; ಹೀಗೆ ಅವರು ತಹಪನೇಸಿಗೆ ಬಂದರು.

8ಆಗ ತಹಪನೇಸಿನಲ್ಲಿ ಕರ್ತನ ವಾಕ್ಯವು ಯೆರೆವಿಾ ಯನಿಗೆ ಉಂಟಾಯಿತು.

9ಹೇಗಂದರೆ--ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತಕ್ಕೊಂಡು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದದ ಮನುಷ್ಯರ ಮುಂದೆ ಬಚ್ಚಿಟ್ಟು ಅವರಿಗೆ ಹೇಳತಕ್ಕದ್ದೇನಂದರೆ--

10ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.

ಯೆರೆಮಿಯ 43 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी