ಯೆರೆಮಿಯ 43:10

ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 43

8ಆಗ ತಹಪನೇಸಿನಲ್ಲಿ ಕರ್ತನ ವಾಕ್ಯವು ಯೆರೆವಿಾ ಯನಿಗೆ ಉಂಟಾಯಿತು.

9ಹೇಗಂದರೆ--ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತಕ್ಕೊಂಡು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದದ ಮನುಷ್ಯರ ಮುಂದೆ ಬಚ್ಚಿಟ್ಟು ಅವರಿಗೆ ಹೇಳತಕ್ಕದ್ದೇನಂದರೆ--

10ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.

11ಅವನು ಬಂದು ಐಗುಪ್ತದೇಶವನ್ನು ಹೊಡೆದು ಮರಣಕ್ಕೆ ಇರುವವರನ್ನು ಮರಣಕ್ಕೂ ಸೆರೆಗೆ ಇರುವವರನ್ನು ಸೆರೆಗೂ ಕತ್ತಿಗೆ ಇರುವವರನ್ನು ಕತ್ತಿಗೂ ಒಪ್ಪಿಸುವನು.

12ಇದಲ್ಲದೆ ನಾನು ಐಗುಪ್ತದ ದೇವರುಗಳ ಮನೆಗಳಲ್ಲಿ ಬೆಂಕಿ ಹಚ್ಚುವೆನು; ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು; ಕುರುಬನು ತನ್ನ ವಸ್ತ್ರವನ್ನು ಹೊದ್ದು ಕೊಳ್ಳುವಂತೆ ಐಗುಪ್ತದೇಶವನ್ನು ಹೊದ್ದುಕೊಂಡು ಸಮಾಧಾನವಾಗಿ ಅಲ್ಲಿಂದ ಹೊರಡುವನು.

ಯೆರೆಮಿಯ 43 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी