ಧರ್ಮೋಪದೇಶಕಾಂಡ 16:12

ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕಮಾಡಿಕೊಂಡು ಈ ನಿಯಮಗಳನ್ನು ಕೈಕೊಂಡು ನಡೆಯಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 16

10ಆಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಪ್ರಕಾರ ನಿನ್ನ ಕೈಕೊಡುವ ಉಚಿತವಾದ ಕಾಣಿಕೆಯ ಮೇರೆಗೆ ನಿನ್ನ ದೇವರಾದ ಕರ್ತನಿಗೆ ವಾರಗಳ ಹಬ್ಬಮಾಡಬೇಕು.

11ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.

12ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕಮಾಡಿಕೊಂಡು ಈ ನಿಯಮಗಳನ್ನು ಕೈಕೊಂಡು ನಡೆಯಬೇಕು.

13ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.

14ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.

ಧರ್ಮೋಪದೇಶಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी