ಧರ್ಮೋಪದೇಶಕಾಂಡ 16:13

ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 16

11ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.

12ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕಮಾಡಿಕೊಂಡು ಈ ನಿಯಮಗಳನ್ನು ಕೈಕೊಂಡು ನಡೆಯಬೇಕು.

13ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.

14ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.

15ನಿನ್ನ ದೇವರಾದ ಕರ್ತನಿಗೆ ಏಳು ದಿವಸ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು; ನಿನ್ನ ದೇವರಾದ ಕರ್ತನು ನಿನ್ನನ್ನು ಎಲ್ಲಾ ಆದಾಯದಲ್ಲಿಯೂ ಎಲ್ಲಾ ಕೈಕೆಲಸದಲ್ಲಿಯೂ ಆಶೀರ್ವದಿಸುವದರಿಂದ ನೀನು ನಿಜವಾಗಿಯೂ ಸಂತೋಷದಿಂದ ಇರಬೇಕು.

ಧರ್ಮೋಪದೇಶಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी