ಯಾಜಕಕಾಂಡ 23:40

ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 23

38ಕರ್ತನ ಸಬ್ಬತ್ತುಗಳ ಹೊರ ತಾಗಿಯೂ ನೀವು ಕರ್ತನಿಗೆ ಸಮರ್ಪಿಸುವ ನಿಮ್ಮ ದಾನ ಪ್ರಮಾಣಗಳ ನಿಮ್ಮ ಎಲ್ಲಾ ಸ್ವಇಷ್ಟವಾದ ಕಾಣಿಕೆಗಳ ಹೊರತಾಗಿಯೂ

39ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ಭೂಮಿಯ ಫಲವನ್ನು ಕೂಡಿಸಿದಾಗ ನೀವು ಕರ್ತನಿಗೆ ಏಳು ದಿವಸಗಳ ಹಬ್ಬ ವನ್ನು ಕೈಕೊಳ್ಳಬೇಕು. ಮೊದಲನೆಯ ದಿವಸವು ಸಬ್ಬತ್ತಾ ಗಿರಬೇಕು ಮತ್ತು ಎಂಟನೆಯ ದಿವಸವು ಸಬ್ಬತ್ತಾಗಿರ ಬೇಕು.

40ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು.

41ಆ ವರುಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಕರ್ತನಿಗಾಗಿ ಕೈಕೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು; ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು.

42ಏಳು ದಿವಸಗಳ ವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು; ಇಸ್ರಾಯೇಲ್ಯ ರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸ ಬೇಕು.

ಯಾಜಕಕಾಂಡ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी