ಯೆಹೆಜ್ಕೇಲನು 40:4

ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 40

2ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.

3ನನ್ನನ್ನು ಅಲ್ಲಿಗೆ ತಂದಾಗ ಇಗೋ, ಅಲ್ಲಿ ಹಿತ್ತಾಳೆಯಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲು ಅಳತೆಯ ಕೋಲು ಇತ್ತು. ಅವನು ಬಾಗಿಲಲ್ಲೇ ನಿಂತಿ ದ್ದನು.

4ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.

5ನೋಡು, ಮನೆಯ ಹೊರಗೆ ಸುತ್ತಮುತ್ತಲೂ ಇರುವ ಗೋಡೆ; ಆ ಮನುಷ್ಯನ ಕೈಯಲ್ಲಿ ಒಂದು ಹಿಡಿ ಉದ್ಧವಾದಂಥ ಆರುಮೊಳ ಉದ್ದ ಅಳತೆ ಕೋಲು ಇತ್ತು; ಹಾಗೆಯೇ ಅವನು ಆ ಕಟ್ಟಡದ ಅಗಲವನ್ನು ಅಳತೆ ಮಾಡಿದಾಗ ಅದರ ಎತ್ತರ ಅಗಲ ಒಂದೇ ಕೋಲಾಗಿತ್ತು.

6ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು.

ಯೆಹೆಜ್ಕೇಲನು 40 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी