ಯೆಹೆಜ್ಕೇಲನು 40:2

ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 40

1ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೇ ದಿನದಲ್ಲಿ ಪಟ್ಟಣವು ಒಡೆದು ಹಾಕಲ್ಪಟ್ಟ ಮೇಲೆ, ಹದಿನಾಲ್ಕನೇ ವರುಷದ ಅದೇ ದಿನದಲ್ಲಿ, ಕರ್ತನ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.

2ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.

3ನನ್ನನ್ನು ಅಲ್ಲಿಗೆ ತಂದಾಗ ಇಗೋ, ಅಲ್ಲಿ ಹಿತ್ತಾಳೆಯಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲು ಅಳತೆಯ ಕೋಲು ಇತ್ತು. ಅವನು ಬಾಗಿಲಲ್ಲೇ ನಿಂತಿ ದ್ದನು.

4ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.

ಯೆಹೆಜ್ಕೇಲನು 40 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी