ಯೆಹೆಜ್ಕೇಲನು 7:9

ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 7

7ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.

8ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.

9ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.

10ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.

11ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.

ಯೆಹೆಜ್ಕೇಲನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी