ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
8ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
9ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.
10ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
11ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
12ಕಾಲವು ಬಂತು, ದಿನವು ಸವಿಾಪ ವಾಯಿತು; ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲ ದಿರಲಿ, ಮಾರುವವನು ದುಃಖಿಸದಿರಲಿ; ಯಾಕಂದರೆ ಎಲ್ಲಾ ಜನಸಮೂಹದ ಮೇಲೆ ರೌದ್ರವಿದೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ