ಯೆಹೋಶುವ 22:32

ಯಾಜಕನಾದ ಎಲಿಯಾಜರನ ಮಗನಾದ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳನ್ನೂ ಗಾದನ ಮಕ್ಕಳನ್ನೂ ಬಿಟ್ಟು ಕಾನಾನ್‌ ದೇಶದಲ್ಲಿರುವ ಇಸ್ರಾಯೇಲ್‌ ಮಕ್ಕಳ ಬಳಿಗೆ ತಿರಿಗಿ ಬಂದು ಅವರಿಗೆ ವರ್ತಮಾನವನ್ನು ತಂದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 22

30ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್‌ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು.

31ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್‌ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.

32ಯಾಜಕನಾದ ಎಲಿಯಾಜರನ ಮಗನಾದ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳನ್ನೂ ಗಾದನ ಮಕ್ಕಳನ್ನೂ ಬಿಟ್ಟು ಕಾನಾನ್‌ ದೇಶದಲ್ಲಿರುವ ಇಸ್ರಾಯೇಲ್‌ ಮಕ್ಕಳ ಬಳಿಗೆ ತಿರಿಗಿ ಬಂದು ಅವರಿಗೆ ವರ್ತಮಾನವನ್ನು ತಂದರು.

33ಆ ಮಾತು ಇಸ್ರಾ ಯೇಲ್‌ ಮಕ್ಕಳಿಗೆ ಮೆಚ್ಚಿಗೆಯಾಯಿತು. ಆದದರಿಂದ ಇಸ್ರಾಯೇಲ್‌ ಮಕ್ಕಳೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ನಿವಾಸವಾಗಿದ್ದ ದೇಶವನ್ನು ನಾಶಮಾಡ ಬೇಕೆಂದು ಅವರ ಮೇಲೆ ಯುದ್ಧಕ್ಕೆ ಹೋಗಬೇಕೆಂಬ ಮಾತನ್ನು ಬಿಟ್ಟು ದೇವರನ್ನು ಕೊಂಡಾಡಿದರು.

34ರೂಬೇನನ ಮಕ್ಕಳೂ ಗಾದನ ಮಕ್ಕಳೂ ಆ ಯಜ್ಞವೇದಿಗೆ ಸಾಕ್ಷಿ ಎಂಬ ಅರ್ಥವಾಗುವ ಏದ್‌ ಎಂದು ಹೆಸರಿಟ್ಟರು. ನಮ್ಮ ಮಧ್ಯ ಕರ್ತನೇ ದೇವರಾಗಿ ದ್ದಾನೆ ಎಂದು ಅದೇ ಸಾಕ್ಷಿಯಾಗಿರುವದು.

ಯೆಹೋಶುವ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी