ಯೆಹೋಶುವ 22:30

ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್‌ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು.

ಸಂದರ್ಭದೊಂದಿಗೆ ಓದಿ · ಯೆಹೋಶುವ 22

28ನಾವು ಅಂದುಕೊಂಡದ್ದೇನಂದರೆ--ಮುಂದೆ ನಮ ಗಾದರೂ ನಮ್ಮ ಸಂತತಿಯವರಿಗಾದರೂ ಹಾಗೆ ಹೇಳಿದರೆ ಆಗ ದಹನಬಲಿಗಳಿಗಾದರೂ ಬಲಿ ಗಳಿಗಾದರೂ ಅಲ್ಲ, ನಮಗೂ ನಿಮಗೂ ನಡುವೆ ಸಾಕ್ಷಿಗೋಸ್ಕರ ನಮ್ಮ ತಂದೆಗಳು ಮಾಡಿದ ಕರ್ತನ ಬಲಿಪೀಠದ ಹೋಲಿಕೆಯಾದ ಯಜ್ಞವೇದಿಯನ್ನು ನೋಡಿರಿ ಎಂದು ಹೇಳುವರು.

29ನಮ್ಮ ದೇವರಾದ ಕರ್ತನ ಗುಡಾರದ ಮುಂದೆ ಇರುವ ಆತನ ಯಜ್ಞ ವೇದಿಯನ್ನು ಹೊರತಾಗಿ ನಾವು ದಹನಬಲಿಗಳಿ ಗೋಸ್ಕರವಾಗಿಯೂ ಆಹಾರ ಸಮರ್ಪಣೆಗಳಿ ಗೋಸ್ಕರವಾಗಿಯೂ ಬಲಿಗಳಿಗೋಸ್ಕರವಾಗಿಯೂ ಮತ್ತೊಂದು ಯಜ್ಞವೇದಿಯನ್ನು ಕಟ್ಟಿ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವದೂ ಆತನ ಕಡೆ ಯಿಂದ ಹಿಂತಿರುಗಿ ಹೋಗುವದೂ ನಮಗೆ ದೂರ ವಾಗಿರಲಿ ಅಂದರು.

30ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್‌ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು.

31ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್‌ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.

32ಯಾಜಕನಾದ ಎಲಿಯಾಜರನ ಮಗನಾದ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳನ್ನೂ ಗಾದನ ಮಕ್ಕಳನ್ನೂ ಬಿಟ್ಟು ಕಾನಾನ್‌ ದೇಶದಲ್ಲಿರುವ ಇಸ್ರಾಯೇಲ್‌ ಮಕ್ಕಳ ಬಳಿಗೆ ತಿರಿಗಿ ಬಂದು ಅವರಿಗೆ ವರ್ತಮಾನವನ್ನು ತಂದರು.

ಯೆಹೋಶುವ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी