ಜೆಕರ್ಯ 5:4

ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.

ಸಂದರ್ಭದೊಂದಿಗೆ ಓದಿ · ಜೆಕರ್ಯ 5

2ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು.

3ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.

4ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.

5ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.

6ನಾನು --ಇದೇನು ಅಂದಾಗ ಅವನು--ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು--ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು.

ಜೆಕರ್ಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी