ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.
3ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.
4ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
5ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.
6ನಾನು --ಇದೇನು ಅಂದಾಗ ಅವನು--ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು--ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು.
7ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ