ಎಜ್ರನು 3:10

ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.

ಸಂದರ್ಭದೊಂದಿಗೆ ಓದಿ · ಎಜ್ರನು 3

8ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೇ ವರುಷದ ಎರ ಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾ ಬೆಲನೂ ಯೋಚಾದಾಕನ ಮಗನಾದ ಯೇಷೂ ವನೂ ಉಳಿದ ಅವರ ಸಹೋದರರಾದ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ ಪ್ರಾರಂಭಿಸಿ ಇಪ್ಪತ್ತು ವರುಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಕರ್ತನ ಆಲಯದ ಕೆಲಸ ನಡಿಸುವದಕ್ಕೆ ಇಟ್ಟರು.

9ಆಗ ಯೇಷೂವನೂ ಅವನ ಮಕ್ಕಳೂ ಅವನ ಸಹೋದರರೂ ಕದ್ಮೀಯೇಲನೂ ಅವನ ಮಕ್ಕಳೂ ಯೆಹೂದನ ಮಕ್ಕಳೂ ಹೇನಾದಾ ದನ ಮಕ್ಕಳೂ ಅವರ ಮಕ್ಕಳೂ ಅವರ ಸಹೋದರ ರಾದ ಲೇವಿಯರೂ ದೇವರ ಆಲಯದಲ್ಲಿರುವ ಕೆಲಸ ದವರನ್ನು ನಡಿಸಲು ಎದ್ದು ನಿಂತರು.

10ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.

11ಆಗ ಅವರು ಕರ್ತನನ್ನು ಕೊಂಡಾಡಿ ಹೊಗಳಿ ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇಸ್ರಾಯೇಲಿನ ಮೇಲೆ ಉಂಟೆಂದೂ ಪರಸ್ಪರವಾಗಿ ಹಾಡಿದರು. ಅವರು ಕರ್ತನನ್ನು ಹೊಗ ಳಿದಾಗ ಕರ್ತನ ಮಂದಿರದ ಅಸ್ತಿವಾರವನ್ನು ಹಾಕುವ ನಿಮಿತ್ತ ಜನರೆಲ್ಲರು ಮಹಾಧ್ವನಿಯಿಂದ ಆರ್ಭಟಿಸಿ ದರು.

12ಮೊದಲಿನ ಮಂದಿರವನ್ನು ನೋಡಿದ್ದ ವೃದ್ಧ ರಾದ ಯಾಜಕರಲ್ಲಿಯೂ ಲೇವಿಯರಲ್ಲಿಯೂ ತಂದೆ ಗಳ ಪ್ರಮುಖರಲ್ಲಿಯೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ದೃಷ್ಟಿಯ ಮುಂದೆ ಹಾಕುತ್ತಿರು ವಾಗ ದೊಡ್ಡ ಶಬ್ದದಿಂದ ಅತ್ತರು.

ಎಜ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी