ಎಜ್ರನು 3:12

ಮೊದಲಿನ ಮಂದಿರವನ್ನು ನೋಡಿದ್ದ ವೃದ್ಧ ರಾದ ಯಾಜಕರಲ್ಲಿಯೂ ಲೇವಿಯರಲ್ಲಿಯೂ ತಂದೆ ಗಳ ಪ್ರಮುಖರಲ್ಲಿಯೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ದೃಷ್ಟಿಯ ಮುಂದೆ ಹಾಕುತ್ತಿರು ವಾಗ ದೊಡ್ಡ ಶಬ್ದದಿಂದ ಅತ್ತರು.

ಸಂದರ್ಭದೊಂದಿಗೆ ಓದಿ · ಎಜ್ರನು 3

10ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.

11ಆಗ ಅವರು ಕರ್ತನನ್ನು ಕೊಂಡಾಡಿ ಹೊಗಳಿ ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇಸ್ರಾಯೇಲಿನ ಮೇಲೆ ಉಂಟೆಂದೂ ಪರಸ್ಪರವಾಗಿ ಹಾಡಿದರು. ಅವರು ಕರ್ತನನ್ನು ಹೊಗ ಳಿದಾಗ ಕರ್ತನ ಮಂದಿರದ ಅಸ್ತಿವಾರವನ್ನು ಹಾಕುವ ನಿಮಿತ್ತ ಜನರೆಲ್ಲರು ಮಹಾಧ್ವನಿಯಿಂದ ಆರ್ಭಟಿಸಿ ದರು.

12ಮೊದಲಿನ ಮಂದಿರವನ್ನು ನೋಡಿದ್ದ ವೃದ್ಧ ರಾದ ಯಾಜಕರಲ್ಲಿಯೂ ಲೇವಿಯರಲ್ಲಿಯೂ ತಂದೆ ಗಳ ಪ್ರಮುಖರಲ್ಲಿಯೂ ಅನೇಕರು ಈ ಮಂದಿರದ ಅಸ್ತಿವಾರವನ್ನು ತಮ್ಮ ದೃಷ್ಟಿಯ ಮುಂದೆ ಹಾಕುತ್ತಿರು ವಾಗ ದೊಡ್ಡ ಶಬ್ದದಿಂದ ಅತ್ತರು.

13ಆದರೆ ಅನೇ ಕರು ಸಂತೋಷದಿಂದ ಶಬ್ದವನ್ನೆತ್ತಿ ಆರ್ಭಟಿಸಿದರು. ಆದಕಾರಣ ಸಂತೋಷದಿಂದ ಆರ್ಭಟಿಸಿದ ಶಬ್ದ ಯಾವದೋ ಜನರ ಅಳುವಿಕೆಯ ಶಬ್ದ ಯಾವುದೋ ಎಂದು ಜನರು ತಿಳಿಯಲಾರದಾಗಿತ್ತು. ಜನರು ಮಹಾ ಧ್ವನಿಯಾಗಿ ಆರ್ಭಟಿಸಿದ್ದರಿಂದ ಅವರ ಶಬ್ದವು ದೂರದ ವರೆಗೆ ಕೇಳಲ್ಪಟ್ಟಿತ್ತು.

ಎಜ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी