೧ ಅರಸುಗಳು 16:20

ಜಿಮ್ರಿಯ ಇತರ ಕಾರ್ಯಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

ಸಂದರ್ಭದೊಂದಿಗೆ ಓದಿ · ೧ ಅರಸುಗಳು 16

18ಪಟ್ಟಣವು ಹಿಡಿಯಲ್ಪಟ್ಟದ್ದನ್ನು ಜಿಮ್ರಿಯು ನೋಡಿದಾಗ ಅವನು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ ಅರಮನೆಯನ್ನು ಬೆಂಕಿ ಯಿಂದ ಸುಟ್ಟು ತಾನೂ ಸತ್ತನು.

19ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟತನಮಾಡಿ ತಾನು ಮಾಡಿದ ಪಾಪ ಗಳ ನಿಮಿತ್ತವಾಗಿಯೂ ಯಾರೊಬ್ಬಾಮನ ಮಾರ್ಗ ದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಇದು ಆಯಿತು.

20ಜಿಮ್ರಿಯ ಇತರ ಕಾರ್ಯಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸು ಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

21ಆಗ ಇಸ್ರಾಯೇಲಿನ ಜನರು ಎರಡು ಭಾಗವಾಗಿ ವಿಭಾಗಿಸಲ್ಪಟ್ಟು ಅರ್ಧ ಜನರು ಗೀನತನ ಮಗನಾದ ತಿಬ್ನಿಯನ್ನು ಅರಸನನ್ನಾಗಿ ಮಾಡಲು ಅವನ ಹಿಂದೆ ಹೋದರು. ಅರ್ಧ ಜನರು ಒಮ್ರಿಯ ಹಿಂದೆ ಹೋದರು.

22ಆದರೆ ಒಮ್ರಿಯ ಹಿಂದೆ ಹೋದ ಜನರು ಜಯಿಸಿದ್ದರಿಂದ ತಿಬ್ನಿಯು ಸತ್ತುಹೋದನು. ಒಮ್ರಿಯು ಆಳಿದನು.

೧ ಅರಸುಗಳು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी