ಅವನು ಒಪ್ಪಿಕೊಂಡನು. ಅಲ್ಲಗಳೆಯಲಿಲ್ಲ; ಅವನು--ನಾನು ಕ್ರಿಸ್ತನಲ್ಲ ಎಂದು ಒಪ್ಪಿಕೊಂಡನು.
18ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
19ನೀನು ಯಾರು ಎಂದು ಅವನನ್ನು ಕೇಳುವದ ಕ್ಕಾಗಿ ಯೆಹೂದ್ಯರು ಯಾಜಕರನ್ನೂ ಲೇವಿಯರನ್ನೂ ಯೆರೂಸಲೇಮಿನಿಂದ ಕಳುಹಿಸಿದಾಗ ಯೋಹಾನನು ಕೊಟ್ಟ ಸಾಕ್ಷಿ ಇದೇ.
20ಅವನು ಒಪ್ಪಿಕೊಂಡನು. ಅಲ್ಲಗಳೆಯಲಿಲ್ಲ; ಅವನು--ನಾನು ಕ್ರಿಸ್ತನಲ್ಲ ಎಂದು ಒಪ್ಪಿಕೊಂಡನು.
21ಅದಕ್ಕವರು--ಹಾಗಾದರೇನು? ನೀನು ಎಲೀಯನೋ ಎಂದು ಕೇಳಿದರು. ಅದಕ್ಕೆ ಅವನು--ನಾನಲ್ಲ ಅಂದನು. ಅವರು ನೀನು ಆ ಪ್ರವಾದಿಯೋ ಎಂದು ಕೇಳಿದ್ದಕ್ಕೆ ಅವನು--ಅಲ್ಲ ಎಂದು ಉತ್ತರಕೊಟ್ಟನು.
22ಆಗ ಅವರು ಅವ ನಿಗೆ--ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳುವಂತೆ ನೀನು ನಿನ್ನ ವಿಷಯದಲ್ಲಿ ಏನು ಹೇಳುತ್ತೀ ಎಂದು ಕೇಳಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ