ಯೋಹಾನನು 1:21

ಅದಕ್ಕವರು--ಹಾಗಾದರೇನು? ನೀನು ಎಲೀಯನೋ ಎಂದು ಕೇಳಿದರು. ಅದಕ್ಕೆ ಅವನು--ನಾನಲ್ಲ ಅಂದನು. ಅವರು ನೀನು ಆ ಪ್ರವಾದಿಯೋ ಎಂದು ಕೇಳಿದ್ದಕ್ಕೆ ಅವನು--ಅಲ್ಲ ಎಂದು ಉತ್ತರಕೊಟ್ಟನು.

ಸಂದರ್ಭದೊಂದಿಗೆ ಓದಿ · ಯೋಹಾನನು 1

19ನೀನು ಯಾರು ಎಂದು ಅವನನ್ನು ಕೇಳುವದ ಕ್ಕಾಗಿ ಯೆಹೂದ್ಯರು ಯಾಜಕರನ್ನೂ ಲೇವಿಯರನ್ನೂ ಯೆರೂಸಲೇಮಿನಿಂದ ಕಳುಹಿಸಿದಾಗ ಯೋಹಾನನು ಕೊಟ್ಟ ಸಾಕ್ಷಿ ಇದೇ.

20ಅವನು ಒಪ್ಪಿಕೊಂಡನು. ಅಲ್ಲಗಳೆಯಲಿಲ್ಲ; ಅವನು--ನಾನು ಕ್ರಿಸ್ತನಲ್ಲ ಎಂದು ಒಪ್ಪಿಕೊಂಡನು.

21ಅದಕ್ಕವರು--ಹಾಗಾದರೇನು? ನೀನು ಎಲೀಯನೋ ಎಂದು ಕೇಳಿದರು. ಅದಕ್ಕೆ ಅವನು--ನಾನಲ್ಲ ಅಂದನು. ಅವರು ನೀನು ಆ ಪ್ರವಾದಿಯೋ ಎಂದು ಕೇಳಿದ್ದಕ್ಕೆ ಅವನು--ಅಲ್ಲ ಎಂದು ಉತ್ತರಕೊಟ್ಟನು.

22ಆಗ ಅವರು ಅವ ನಿಗೆ--ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳುವಂತೆ ನೀನು ನಿನ್ನ ವಿಷಯದಲ್ಲಿ ಏನು ಹೇಳುತ್ತೀ ಎಂದು ಕೇಳಿದರು.

23ಅವನು--ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿ ಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂದು ಪ್ರವಾದಿ ಯಾದ ಯೆಶಾಯನು ಹೇಳಿದ ಶಬ್ದವೇ ನಾನು ಎಂದು ಉತ್ತರಕೊಟ್ಟನು.

ಯೋಹಾನನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी