ಅದೇನಂದರೆ ನನ್ನ ಹೃದಯದಲ್ಲಿ ದೊಡ್ಡ ಭಾರವೂ ಎಡೆಬಿಡದ ದುಃಖವೂ ಉಂಟು.
1ಈ ಮಾತನ್ನು ನಾನು ಸುಳ್ಳಾಡದೆ ಕ್ರಿಸ್ತನಲ್ಲಿ ಸತ್ಯವಾಗಿ ಹೇಳುತ್ತೇನೆ; ಪವಿ ತ್ರಾತ್ಮನಲ್ಲಿ ನನ್ನ ಮನಸ್ಸಾಕ್ಷಿಯು ನನಗೆ ಸಾಕ್ಷಿ ಕೊಡುತ್ತದೆ.
2ಅದೇನಂದರೆ ನನ್ನ ಹೃದಯದಲ್ಲಿ ದೊಡ್ಡ ಭಾರವೂ ಎಡೆಬಿಡದ ದುಃಖವೂ ಉಂಟು.
3ಶರೀರ ಸಂಬಂಧ ವಾಗಿ ನನ್ನ ಸ್ವಜನರಾಗಿರುವ ನನ್ನ ಸಹೋದರರಿಗೊಸ್ಕರ ನಾನೇ ಕ್ರಿಸ್ತನಿಂದ ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.
4ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ