ರೋಮಾಪುರದವರಿಗೆ 9:3

ಶರೀರ ಸಂಬಂಧ ವಾಗಿ ನನ್ನ ಸ್ವಜನರಾಗಿರುವ ನನ್ನ ಸಹೋದರರಿಗೊಸ್ಕರ ನಾನೇ ಕ್ರಿಸ್ತನಿಂದ ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 9

1ಈ ಮಾತನ್ನು ನಾನು ಸುಳ್ಳಾಡದೆ ಕ್ರಿಸ್ತನಲ್ಲಿ ಸತ್ಯವಾಗಿ ಹೇಳುತ್ತೇನೆ; ಪವಿ ತ್ರಾತ್ಮನಲ್ಲಿ ನನ್ನ ಮನಸ್ಸಾಕ್ಷಿಯು ನನಗೆ ಸಾಕ್ಷಿ ಕೊಡುತ್ತದೆ.

2ಅದೇನಂದರೆ ನನ್ನ ಹೃದಯದಲ್ಲಿ ದೊಡ್ಡ ಭಾರವೂ ಎಡೆಬಿಡದ ದುಃಖವೂ ಉಂಟು.

3ಶರೀರ ಸಂಬಂಧ ವಾಗಿ ನನ್ನ ಸ್ವಜನರಾಗಿರುವ ನನ್ನ ಸಹೋದರರಿಗೊಸ್ಕರ ನಾನೇ ಕ್ರಿಸ್ತನಿಂದ ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.

4ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.

5ಪಿತೃಗಳು ಇವರಿಗೆ ಸಂಬಂಧಪಟ್ಟವರೇ; ಶರೀರ ಸಂಬಂಧವಾಗಿ ಕ್ರಿಸ್ತನು ಇವರಿಂದಲೇ ಬಂದನು; ಆತನು ಎಲ್ಲಾದರ ಮೇಲೆ ಇರುವಾತನಾಗಿದ್ದು ನಿರಂತರಕ್ಕೂ ಸ್ತುತಿ ಹೊಂದತಕ್ಕ ದೇವರಾಗಿದ್ದಾನೆ. ಆಮೆನ್‌.

ರೋಮಾಪುರದವರಿಗೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी