ಯೆರೆಮಿಯ 6:5

ಏಳಿರಿ, ರಾತ್ರಿಯಲ್ಲಿ ಏರಿಹೋಗಿ ಅವಳ ಅರಮನೆಗಳನ್ನು ನಾಶಮಾಡೋಣ;

ಸಂದರ್ಭದೊಂದಿಗೆ ಓದಿ · ಯೆರೆಮಿಯ 6

3ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.

4ಅವಳಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ; ಏಳಿರಿ, ಮಧ್ಯಾಹ್ನದಲ್ಲಿ ಏರಿ ಹೋಗೋಣ, ನಮಗೆ ಅಯ್ಯೋ! ಹೊತ್ತು ಮುಣುಗುತ್ತದಲ್ಲಾ; ಸಂಜೆಯ ನೆರಳುಗಳು ಉದ್ದವಾ ಗುತ್ತವೆ.

5ಏಳಿರಿ, ರಾತ್ರಿಯಲ್ಲಿ ಏರಿಹೋಗಿ ಅವಳ ಅರಮನೆಗಳನ್ನು ನಾಶಮಾಡೋಣ;

6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಮರಗಳನ್ನು ಕಡಿಯಿರಿ; ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ; ವಿಚಾರಿಸಲ್ಪಡತಕ್ಕ ಪಟ್ಟಣವು ಇದೇ; ಅವಳಲ್ಲಿ ತುಂಬ ಬಲಾತ್ಕಾರ ಅದೆ.

7ಬುಗ್ಗೆಯು ತನ್ನ ನೀರನ್ನು ಹರಿಯ ಮಾಡುವ ಹಾಗೆ ಅವಳು ತನ್ನ ಕೆಟ್ಟತನವನ್ನು ಹರಿಯ ಮಾಡುತ್ತಾಳೆ; ಬಲಾತ್ಕಾರವೂ ಸುಲಿಗೆಯೂ ಅವಳಲ್ಲಿ ಕೇಳಬರುತ್ತವೆ. ದುಃಖವೂ ಗಾಯಗಳೂ ಯಾವಾ ಗಲೂ ನನ್ನ ಮುಂದೆ ಅವೆ.

ಯೆರೆಮಿಯ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी