ಆದಿಕಾಂಡ 32:6

ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 32

4ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು;

5ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು.

6ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.

7ಆಗ ಯಾಕೋಬನು ಬಹಳವಾಗಿ ಭಯಪಟ್ಟು ಕುಂದಿ ಹೋಗಿ ತನ್ನ ಸಂಗಡ ಇದ್ದ ಜನರನ್ನೂ ಕುರಿಗಳನ್ನೂ ದನಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು.

8ಏಸಾವನು ಒಂದು ಗುಂಪಿನ ಮೇಲೆ ಬಿದ್ದು ಅದನ್ನು ಹೊಡೆದರೆ ಉಳಿದ ಗುಂಪು ತಪ್ಪಿಸಿಕೊಂಡು ಹೋದೀತೆಂದು ಅಂದು ಕೊಂಡನು.

ಆದಿಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी