ಆದಿಕಾಂಡ 32:4

ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು;

ಸಂದರ್ಭದೊಂದಿಗೆ ಓದಿ · ಆದಿಕಾಂಡ 32

2ಯಾಕೋಬನು ಅವರನ್ನು ನೋಡಿದಾಗ--ಇದು ದೇವರ ಸೈನ್ಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್‌ ಎಂದು ಹೆಸರಿಟ್ಟನು.

3ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.

4ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು;

5ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು.

6ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.

ಆದಿಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी