೨ ಸಮುವೇಲನು 15:9

ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 15

7ನಾಲ್ಕು ವರುಷಗಳಾದ ತರುವಾಯ ಅಬ್ಷಾಲೋ ಮನು ಅರಸನಿಗೆ--ನಾನು ಕರ್ತನಿಗೆ ಮಾಡಿಕೊಂಡಿದ್ದ ನನ್ನ ಪ್ರಮಾಣವನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವದಕ್ಕೆ ಅಪ್ಪಣೆಕೊಡಬೇಕು.

8ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು.

9ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.

10ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು.

11ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು.

೨ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी