೨ ಸಮುವೇಲನು 15:11

ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 15

9ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.

10ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು.

11ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು.

12ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು.

13ದಾವೀದನ ಬಳಿಗೆ ಒಬ್ಬ ದೂತನು ಬಂದು --ಇಸ್ರಾಯೇಲ್‌ ಜನರ ಹೃದಯಗಳು ಅಬ್ಷಾ ಲೋಮನ ಕಡೆಗಾದವು ಅಂದನು.

೨ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी