ಹೋಶೇ 13:13

ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.

ಸಂದರ್ಭದೊಂದಿಗೆ ಓದಿ · ಹೋಶೇ 13

11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.

12ಎಫ್ರಾ ಯಾಮಿನ ದುಷ್ಕೃತ್ಯವು ಕಟ್ಟಲ್ಪಟ್ಟಿದೆ, ಅವನ ಪಾಪವು ಬಚ್ಚಿಡಲ್ಪಟ್ಟಿದೆ.

13ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.

14ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.

15ಅವನು ತನ್ನ ಸಹೋದರರ ಮಧ್ಯದಲ್ಲಿ ಫಲಭರಿತನಾಗಿದ್ದರೂ ಪೂರ್ವದ ಗಾಳಿಯು ಬರಲು ಕರ್ತನ ಗಾಳಿಯು ಅರಣ್ಯದಿಂದ ಏರಿಬರುವದು, ಆಗ ಅವನ ಬುಗ್ಗೆಯು ಒಣಗಿ ಅವನ ಒರತೆಯು ಬತ್ತಿ ಹೋಗುವದು. ಅವನು ಎಲ್ಲಾ ಪ್ರಿಯ ವಸ್ತುಗಳ ನಿಧಿಯನ್ನು ಹಾಳು ಮಾಡುವನು.

ಹೋಶೇ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी