ಎಫ್ರಾ ಯಾಮಿನ ದುಷ್ಕೃತ್ಯವು ಕಟ್ಟಲ್ಪಟ್ಟಿದೆ, ಅವನ ಪಾಪವು ಬಚ್ಚಿಡಲ್ಪಟ್ಟಿದೆ.
10ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ?
11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
12ಎಫ್ರಾ ಯಾಮಿನ ದುಷ್ಕೃತ್ಯವು ಕಟ್ಟಲ್ಪಟ್ಟಿದೆ, ಅವನ ಪಾಪವು ಬಚ್ಚಿಡಲ್ಪಟ್ಟಿದೆ.
13ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.
14ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ