೧ ಅರಸುಗಳು 4:28

ಹೀಗೆಯೇ ಪ್ರತಿ ಮನುಷ್ಯನು ತನ್ನ ವಂತಿನ ಪ್ರಕಾರ ಕುದುರೆಗಳಿಗೋಸ್ಕರವೂ ಸವಾರಿ ಒಂಟೆಗಳಿ ಗೋಸ್ಕರವೂ ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ ಹುಲ್ಲನ್ನೂ ತಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 4

26ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಾಲ್ವತ್ತು ಸಾವಿರ ಜೋಡಿ ಕುದುರೆಗಳೂ ಹನ್ನೆರಡು ಸಾವಿರ ರಾಹುತರೂ ಇದ್ದರು.

27ಆ ಅಧಿಕಾರಿಗಳಲ್ಲಿ ಪ್ರತಿ ಯೊಬ್ಬನು ತನ್ನ ತನ್ನ ತಿಂಗಳಿನ ವಂತಿನ ಪ್ರಕಾರ ಅರಸನಾದ ಸೊಲೊಮೋನನ ಮೇಜಿಗೆ ಬರುವವ ರೆಲ್ಲರಿಗೂ ಆಹಾರ ಪದಾರ್ಥವನ್ನು ಒದಗಿಸಿಕೊಡು ತ್ತಿದ್ದನು. ಯಾವದರಲ್ಲಿಯೂ ಅವರಿಗೆ ಕೊರತೆಯಾಗ ಲಿಲ್ಲ.

28ಹೀಗೆಯೇ ಪ್ರತಿ ಮನುಷ್ಯನು ತನ್ನ ವಂತಿನ ಪ್ರಕಾರ ಕುದುರೆಗಳಿಗೋಸ್ಕರವೂ ಸವಾರಿ ಒಂಟೆಗಳಿ ಗೋಸ್ಕರವೂ ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ ಹುಲ್ಲನ್ನೂ ತಂದನು.

29ಇದಲ್ಲದೆ ದೇವರು ಸೊಲೊ ಮೋನನಿಗೆ ಸಮುದ್ರ ತೀರದಲ್ಲಿರುವ ಮರಳಿನ ಹಾಗೆ ಅತ್ಯಧಿಕವಾಗಿ ಜ್ಞಾನ ವಿವೇಕಗಳನ್ನೂ ಮನೋವಿಶಾಲ ತೆಯನ್ನೂ ಕೊಟ್ಟನು.

30ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.

೧ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी