ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
7ನಿನ್ನ ಸಂಗಡ ಒಟ್ಟುಗೂಡಿದ ಮನುಷ್ಯರೆಲ್ಲರು ನಿನ್ನನ್ನು ಮೇರೆಯ ವರೆಗೂ ತಂದಿದ್ದಾರೆ: ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸ ಮಾಡಿ ನಿನಗೆ ವಿರೋಧವಾಗಿ ಜಯಹೊಂದಿದ್ದಾರೆ; ನಿನ್ನ ರೊಟ್ಟಿಯನ್ನು ತಿನ್ನುವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ; ಅವನಲ್ಲಿ ವಿವೇಕವೇನೂ ಇಲ್ಲ.
8ಕರ್ತನು ಅನ್ನುವದೇನಂದರೆ--ನಾನು ಆ ದಿನದಲ್ಲಿ ಎದೋಮಿ ನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೋ?
9ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
10ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.
11ನೀನು ಆ ಕಡೆಯಲ್ಲಿ ನಿಂತ ದಿನದಲ್ಲಿ ಪರರು ಅವನ ಸೆರೆಯಾಗಿ ತಕ್ಕೊಂಡುಹೋದ ದಿನದಲ್ಲಿ ಅನ್ಯರು ಅವನ ಬಾಗಲುಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಮೇಲೆ ಚೀಟುಗಳನ್ನು ಹಾಕಿದಾಗ ನೀನು ಸಹ ಅವರಲ್ಲಿ ಒಬ್ಬನ ಹಾಗಿದ್ದಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ