ಓಬದ್ಯ 1:8

ಕರ್ತನು ಅನ್ನುವದೇನಂದರೆ--ನಾನು ಆ ದಿನದಲ್ಲಿ ಎದೋಮಿ ನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೋ?

ಸಂದರ್ಭದೊಂದಿಗೆ ಓದಿ · ಓಬದ್ಯ 1

6ಏಸಾವನು ಎಷ್ಟೋ ಶೋಧಿ ಸಲ್ಪಟ್ಟಿದ್ದಾನೆ, ಅವನ ರಹಸ್ಯ ಸ್ಥಳಗಳು ಹುಡುಕ ಲ್ಪಟ್ಟಿವೆ.

7ನಿನ್ನ ಸಂಗಡ ಒಟ್ಟುಗೂಡಿದ ಮನುಷ್ಯರೆಲ್ಲರು ನಿನ್ನನ್ನು ಮೇರೆಯ ವರೆಗೂ ತಂದಿದ್ದಾರೆ: ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸ ಮಾಡಿ ನಿನಗೆ ವಿರೋಧವಾಗಿ ಜಯಹೊಂದಿದ್ದಾರೆ; ನಿನ್ನ ರೊಟ್ಟಿಯನ್ನು ತಿನ್ನುವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ; ಅವನಲ್ಲಿ ವಿವೇಕವೇನೂ ಇಲ್ಲ.

8ಕರ್ತನು ಅನ್ನುವದೇನಂದರೆ--ನಾನು ಆ ದಿನದಲ್ಲಿ ಎದೋಮಿ ನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೋ?

9ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.

10ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.

ಓಬದ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी