ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್ (ಅಳತೆ) ನಿಮಗಿರಬೇಕು.
8ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸ್ವಾಸ್ತ್ಯವಾಗಿರುವದು; ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವಪಡಿಸು ವದೇ ಇಲ್ಲ; ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲ್ಪಡುವದು.
9ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನು ಸುಲಿಗೆಯನ್ನು ಬಿಡಿರಿ; ನ್ಯಾಯವನ್ನೂ ನೀತಿಯನ್ನೂ ಮಾಡಿರಿ; ನನ್ನ ಜನರನ್ನು ಓಡಿಸಬೇಡಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
10ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್ (ಅಳತೆ) ನಿಮಗಿರಬೇಕು.
11ಬತ್ ಹೋಮೆ ರಿನ ಹತ್ತನೇ ಪಾಲನ್ನೂ ಎಫವು ಹೋಮೆರಿನ ಹತ್ತನೆ ಪಾಲನ್ನೂ ಹಿಡಿಯುವ ಹಾಗೆ ಏಫಕ್ಕೂ ಬತಗೂ ಒಂದೇ ಅಳತೆ ಇರಬೇಕು. ಅವುಗಳ ಅಳತೆ ಹೋಮೆ ರಿನ ಅಳತೆಯ ಪ್ರಕಾರ ಇರಬೇಕು.
12ಶೇಕೆಲ್ ಇಪ್ಪತ್ತು ಗೇರಾ ಆಗಿರಬೇಕು. ನಿಮ್ಮ ಮಾನೆಯು ಇಪ್ಪತ್ತು ಶೇಕೆಲು ಇಪ್ಪತ್ತೈದು ಶೇಕೆಲು ಮತ್ತು ಹದಿನೈದು ಶೇಕೆಲು ಆಗಿರಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ